Chief Editor
Manohar. R (Manu)
Photo Journalist
chitrataramanu@gmail.com
+91 9845549026
ಟೋನಿಗೆ ಗುಲ್ಬರ್ಗದಲ್ಲಿ ಚಿತ್ರೀಕರಣ
Posted date: 04 Mon, Jun 2012 ? 08:34:28 AM

ಸ್ಕೈ ಸ್ಟುಡಿಯೋಸ್ ಲಾಂಛನದಲ್ಲಿ ಪಿ.ಎನ್.ಕೃಷ್ಣಮೂರ್ತಿ(ಶ್ರೀನಗರ ಕಿಟ್ಟಿ) ಹಾಗೂ ಇಂದ್ರಕುಮಾರ್.ಬಿ.ವಿ ಅವರು ನಿರ್ಮಿಸುತ್ತಿರುವ ‘ಟೋನಿ ಚಿತ್ರಕ್ಕೆ ಗುಲ್ಬರ್ಗದಲ್ಲಿ ಚಿತ್ರೀಕರಣ ನಡೆದಿದೆ.
ಗುಲ್ಬರ್ಗದ ಬಳಿಯ ಆಳಂದದಲ್ಲಿ ಮುನ್ನೂರು ಎಕರೆಯ ವಿಶಾಲ ಭೂಮಿ. ನಲವತ್ತೈದು ಡಿಗ್ರಿಗೂ ಹೆಚ್ಚಿನ ತಾಪಮಾನ. ಇಂಥಹ ಸ್ಥಳದಲ್ಲಿ ಮೂರು ದಿನಗಳ ಕಾಲ ‘ಟೋನಿ ಚಿತ್ರದ ಚಿತ್ರೀಕರಣ. ಶರತ್‌ಲೋಹಿತಾಶ್ವ ಹಾಗೂ ದಿಲೀಪ್‌ರಾಜ್ ಅಭಿನಯಿಸಿದ ಈ ಸನ್ನಿವೇಶದಲ್ಲಿ ನೂರಕ್ಕೂ ಹೆಚ್ಚಿನ ಸಹಕಲಾವಿದರು ಪಾಲ್ಗೊಂಡಿದ್ದರು. ಅಧಿಕ ತಾಪಮಾನವಿರುವ ಆ ಸ್ಥಳದಲ್ಲಿ ಪಾದರಕ್ಷೆ ಧರಿಸದೆ ಬರಿಗಾಲಿನಲ್ಲಿ ಅಭಿನಯಿಸುವ ಸನ್ನಿವೇಶಗಳನ್ನು ಸೆರೆ ಹಿಡಿದಿದ್ದೇವೆ ಎನ್ನುತ್ತಾರೆ ನಿರ್ದೇಶಕ ಜಯತೀರ್ಥ.
ಚಿತ್ರಕ್ಕೆ ಒಂದೇ ಹಂತದಲ್ಲಿ ಬಹುತೇಕ ಭಾಗದ ಚಿತ್ರೀಕರಣ ಪೂರ್ಣವಾಗಿದೆ. ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಸಾಧುಕೋಕಿಲಾ ಸಂಗೀತ ನೀಡಿದ್ದಾರೆ. ಸುಜ಼್ಞಾನ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್‌ಮಾದ ಸಾಹಸ ನಿರ್ದೇಶನ, ಹರ್ಷ, ಇಮ್ರಾನ್, ಧನ್‌ಕುಮಾರ್ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರೀನಗರ ಕಿಟ್ಟಿ, ಐಂದ್ರಿತಾ ರೇ, ದಿಲೀಪ್‌ರಾಜ್, ಪ್ರೀತಿ ಜಿಂಗನಿಯಾ, ಹರೀಶ್‌ರಾಯಪ್ಪ, ಶರತ್‌ಲೋಹಿತಾಶ್ವ, ವೀಣಾಸುಂದರ್, ಸುಚೀಂದ್ರಪ್ರಸಾದ್, ಧರ್ಮೇಂದ್ರಪ್ರಸಾದ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಟೋನಿಗೆ ಗುಲ್ಬರ್ಗದಲ್ಲಿ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.